Thursday, March 10, 2011

ನಿನಗೊಂದು ಕವನ

ನೀ ಬರುವ ದಾರಿಯಲ್ಲಿ ಹಸಿರಾಗಿ ನಾನು ಮಲಗಿ
ನೀನಿಡುವ ಹೆಜ್ಜೆಯ ಮೇಲೆ ಹೂವಾಗಿ ನಾ ಅರಳುವೆ....
ನಿನ್ನ ಚೆಲುವ ಆ ಕಂಗಳಲಿ ಬೆಳಕಾಗಿ ನಾನು ಚೆಲ್ಲಿ
ನೀ ನೋಡೋ ಕಣ ಕಣದಲ್ಲೂ ನಾ ಇರುವೆನು.......
ನೀ ಉಸಿರಾಡೊ ಆ ಗಾಳಿಯಲಿ ನನ್ನೆದೆಯ ಪ್ರೀತಿಯ ತಂಬಿ
ನಿನ್ನೊಡಲ ಅಣು ಅಣುವಲ್ಲೂ ನಾ ಹರಿದಾಡುವೆ......
ನೀ ಕಾಣೊ ಕನುಸಗಳೊಳಗೆ ನನ್ನ ಕಲ್ಪನೆಯ ಜೀವವ ತುಂಬಿ
ಪ್ರತಿ ಕನಸಿನ ಕ್ಷಣ ಕ್ಷಣದಲ್ಲೂ ನಿನ್ನ ಕಣ್ಣೆದುರೆ ಓಡೋಡಿ ಬರುವೆ ನಾ...........





No comments:

Post a Comment