Wednesday, March 23, 2011

ಕನಸಿನ ಗೆಳತಿ.........

ಮಿಂಚಂತೆ ಕಣ್ಣಂಚಲಿ ಬಂದೆ
ಕೊಂಚ ಹೊತ್ತು ಇರಲಾರೆಯ ಮುಂದೆ.....
ಮಿಲನವಾಯ್ತು ನಮ್ಮ
ಮನ ಆ ಕಾಮನಬಿಲ್ಲಂತೆ.......
ಹೂವಾಯಿತು ಈ ಹೃದಯ
ನಿನ್ನ ಚೆಲುವಂತೆ........
ಹಾಡಾಯಿತು ಈ ಕವನ
ನಿನ್ನ ಮುದ್ದು ನಗುವಂತೆ......
ಮರೆಯಾದೆ ನೀ
ಈ ಹಾಡು ಮುಗಿದಂತೆ.......
ಹಾರಿ ಹೋಯ್ತು
ನನ್ನ ಕನಸು ಬೆಳಗಾದಂತೆ............
                                  ಹೋಗಿ ಬಾ ಗೆಳತಿ.......

Thursday, March 10, 2011

ನಿನಗೊಂದು ಕವನ

ನೀ ಬರುವ ದಾರಿಯಲ್ಲಿ ಹಸಿರಾಗಿ ನಾನು ಮಲಗಿ
ನೀನಿಡುವ ಹೆಜ್ಜೆಯ ಮೇಲೆ ಹೂವಾಗಿ ನಾ ಅರಳುವೆ....
ನಿನ್ನ ಚೆಲುವ ಆ ಕಂಗಳಲಿ ಬೆಳಕಾಗಿ ನಾನು ಚೆಲ್ಲಿ
ನೀ ನೋಡೋ ಕಣ ಕಣದಲ್ಲೂ ನಾ ಇರುವೆನು.......
ನೀ ಉಸಿರಾಡೊ ಆ ಗಾಳಿಯಲಿ ನನ್ನೆದೆಯ ಪ್ರೀತಿಯ ತಂಬಿ
ನಿನ್ನೊಡಲ ಅಣು ಅಣುವಲ್ಲೂ ನಾ ಹರಿದಾಡುವೆ......
ನೀ ಕಾಣೊ ಕನುಸಗಳೊಳಗೆ ನನ್ನ ಕಲ್ಪನೆಯ ಜೀವವ ತುಂಬಿ
ಪ್ರತಿ ಕನಸಿನ ಕ್ಷಣ ಕ್ಷಣದಲ್ಲೂ ನಿನ್ನ ಕಣ್ಣೆದುರೆ ಓಡೋಡಿ ಬರುವೆ ನಾ...........





Tuesday, March 8, 2011

ನೀನೊಮ್ಮೆ ಮೌನವಾದಾಗ:


 
ನಿನ್ನ ಒಂದು ಮೃದು ಮಾತು ಸಾಕು..........  
ಒಂದು ಸಣ್ಣನೆಯ ನಗು ಸಾಕು...............
ಒಂದು ಸಿಹಿ ನೋಟ ಸಾಕು..................
ಇದೇನು ಸಿಗದ ಹೊತ್ತು ಇದು ಎಂದು ತಿಳಿದಾಗಿದೆ ಗೆಳತಿ
ಆದರೂ ನಾ ಮೌನವಾಗಿರಲಾರೆ ಮಾತಾಡದೆಯೂ ಇರಲಾರದಾಗಿದೆ ಈ ಮನಸು......
ನೀನು ಕರೆಯೊ ಚಿನ್ನು ಅನ್ನೊ ಹೆಸರಲ್ಲಿ  ಒಲವ ತುಂಬದೇ ಹೋದರೂ ಪರ್ವಾಗಿಲ್ಲ 
ಈ ಹೊತ್ತು ಸುಮ್ಮನಾದರೂ ಒಂದೊಮ್ಮೆ ಕರೆದರೂ ಸಾಕು ಕಣೆ......
ನಿಟ್ಟುಸಿರ ಬಿಟ್ಟು  ಮಲಗುವೆ..........................